01/06/2026
ಹೆಮ್ಮಾಡಿ ಟ್ರೋಫಿ ದ್ವಿತೀಯ ಪ್ರಶಸ್ತಿ ನಗದನ್ನು ಗಾಯಾಳು ಕ್ರಿಕೆಟಿಗ ಅಶೋಕ್ ಮೂಡುಬೆಟ್ಟು ಚಿಕಿತ್ಸೆಗೆ ನೀಡಿದ ವಿ.ಎಮ್.ಕಟ್ಟೆ ಫ್ರೆಂಡ್ಸ್ ಕಾಳಾವರ
ಹೆಮ್ಮಾಡಿ ಟ್ರೋಫಿ ವಿಜೇತ ತಂಡದಿಂದ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ₹ 40 ಸಾವಿರ ನೆರವು
ಉಡುಪಿ: ಕ್ರೀಡೆಯ ಜೊತೆಗೆ ಮಾನವೀಯ ಮೌಲ್ಯಗಳಿಗೂ ಆದ್ಯತೆ ನೀಡುವ ಅಪರೂಪದ ಉದಾಹರಣೆಯೊಂದು ಹೆಮ್ಮಾಡಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕಂಡುಬಂದಿದೆ.
ಹಾರಿಸ್ ಹೆಮ್ಮಾಡಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಆಯೋಜಿಸಲಾದ ಹೆಮ್ಮಾಡಿ ಟ್ರೋಫಿ-2026ರ ಫೈನಲ್ ಪಂದ್ಯದಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ ರಕ್ಷಿತ್ ಶೆಟ್ಟಿ ಕಾಳಾವರ ನಾಯಕತ್ವದ ವಿ.ಎಮ್.ಕಟ್ಟೆ ಫ್ರೆಂಡ್ಸ್ ಸೇನಾಪುರ ತಂಡವು ತಮಗೆ ದೊರೆತ 40 ಸಾವಿರ ನಗದು ಬಹುಮಾನವನ್ನು ಉಡುಪಿ ಜಿಲ್ಲೆಯ ಯುವ ಕ್ರಿಕೆಟಿಗ ಅಶೋಕ್ ಮೂಡುಬೆಟ್ಟು ಅವರ ಚಿಕಿತ್ಸೆಗೆ ದೇಣಿಗೆಯಾಗಿ ನೀಡಿದೆ.
ಅಶೋಕ್ ಮೂಡುಬೆಟ್ಟು ಅವರು ಇತ್ತೀಚೆಗೆ ಕಟ್ಟಡವೊಂದರ ಪೇಂಟಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ ಎರಡೂ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಚಿ�