24/01/2021
" ರಾಷ್ಟ್ರೀಯ ಹೆಣ್ಣು ಮಕ್ಕಳ" ದಿನಾಚರಣೆ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಶಿವಮೊಗ್ಗದ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿ ಶಿವಮೊಗ್ಗ, ತಾಲ್ಲೂಕು ಪಂಚಾಯತ್, ಅಗಸವಲ್ಲಿ ಗ್ರಾಮ ಪಂಚಾಯತ್ , ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರ ಸಹಯೋಗದಲ್ಲಿ ದಿನಾಂಕ 22-01-2೦21 ರ ಶುಕ್ರವಾರದಂದು ಕಾರ್ಯಕ್ರಮ ವನ್ನು ಶಾಲೆಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವು ಧ್ವಜಾರೋಹಣದೊಂದಿಗೆ ಪ್ರಾರಂಭ ವಾಯಿತು. ಶ್ರೀಮತಿ ರೇಣುಕಾ ಮತ್ತು ಶ್ರೀಮತಿ ಸುಕನ್ಯಾ ಗೈಡ್ ಶಿಕ್ಷಕಿಯರು ಶ್ರೀಮತಿ ಭಾರತಿ ಡಾಯಸ್ ASOC ಇವರ ನೇತೃತ್ವದಲ್ಲಿ ಶಾಲೆಯ ಗೈಡ್ ವಿದ್ಯಾರ್ಥಿನಿ ಮತ್ತು ಇತರ ವಿದ್ಯಾರ್ಥಿಗಳೊಂದಿಗೆ ಧ್ವಜಾರೋಹಣ ನೆರೆವೇರಿಸಿದರು. ನಂತರ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಶ್ರೀ ರಾಮಚಂದ್ರಪ್ಪ, ಮುಖ್ಯೋಪಾಧ್ಯಾಯರು, ಪ್ರೌಢಶಾಲೆ,ಶ್ರೀ ರಾಜಶೇಖರ ಮುಖ್ಯೋಪಾಧ್ಯಾಯ ಹಿ.ಪ್ರ. ಶಾಲೆ, ಶ್ರೀಮತಿ ಗಾಯತ್ರಿ Pre-AlT, BIERT, ಶ್ರೀಮತಿ ಮಧು CRP, ಶ್ರೀ ಹೆಚ್ ಪರಮೇಶ್ವರ,ಜಿಲ್ಲಾ ಕಾರ್ಯದರ್ಶಿ, ಶ್ರೀ ವೈ ಆರ್ ವೀರೇಶಪ್ಪ ಸಹ ಕಾರ್ಯದರ್ಶಿ, ಶ್ರೀಮತಿ ಭಾರತಿ ಡಾಯಸ್ ASOC, ಕುಮಾರಿ ಸುಮಲತಾ SGV ಉಪಸ್ಥಿತರಿದ್ದು ಉದ್ಘಾಟಿಸಿದರು.
ನಂತರ ಶ್ರೀಮತಿ ಭಾರತಿ ಡಾಯಸ್ ರವರು ಹೆಣ್ಣು ಮಕ್ಕಳ ಆರೋಗ್ಯ, ಪೌಷ್ಟಿಕ ಆಹಾರ, ವೈಯಕ್ತಿಕ ಸ್ವಚ್ಛತೆ ಬಗ್ಗೆ ಮನಮುಟ್ಟುವಂತೆ ಮಾತನಾಡಿದರು. ಕುಮಾರಿ ಸುಮಲತಾ ರವರು ಸಾಧನೆ ತೋರಿದ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದರು. ಶ್ರೀ ರಾಜೇಶ್ ಅವಲಕ್ಕಿ , ಸಹ ಕಾರ್ಯದರ್ಶಿ ಸ್ಥಳೀಯ ಸಂಸ್ಥೆ ರವರು ಸರ್ವರನ್ನು ಸ್ವಾಗತಿಸಿ ನಿರೂಪಿಸಿದರು. ಶ್ರೀಮತಿ ಸುಕನ್ಯಾ ವಂದಾನರ್ಪಣೆ ಸಲ್ಲಿಸಿದರು. ನಂತರ ಶ್ರೀ ಡಿ. ಎನ್.ನೂರ್ ಅಹ್ಮದ್ ಕಾರ್ಯದರ್ಶಿ, ಶ್ರೀ ದೀಪು ಪಟೇಲ್, ಖಜಾಂಜಿ ಸ್ಥಳೀಯ ಸಂಸ್ಥೆ ಇವರುಗಳ ನೇತೃತ್ವದಲ್ಲಿ ಮತ್ತು ರೋವರ್ಸ್ ರೇಂಜರ್ಸ್ ಸಹಯೋಗದಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ, Archery, rifle shooting, blind fold game, tug of war, musical chair ಇತ್ಯಾದಿ ಆಟಗಳನ್ನು ಆಡಿಸಲಾಯಿತು. ನಂತರ ಸರ್ವರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. .