ಗಣಿತ ಕಲಿಕೆ ತುಂಬಾ ಸುಲಭ ಮತ್ತು ವಿಜ್ಞಾನ ಅತಿ ಸುಲಭ

  • Home
  • India
  • Muddebihal
  • ಗಣಿತ ಕಲಿಕೆ ತುಂಬಾ ಸುಲಭ ಮತ್ತು ವಿಜ್ಞಾನ ಅತಿ ಸುಲಭ

ಗಣಿತ ಕಲಿಕೆ ತುಂಬಾ ಸುಲಭ ಮತ್ತು ವಿಜ್ಞಾನ ಅತಿ ಸುಲಭ ಗಣಿತ ಕಲಿಕೆ ಸುಲಭ ಗೋಳಿಸುವುದು
(2)

29/06/2026

21/06/2026
 # silent letter in English word
18/06/2026

# silent letter in English word

 # ಪ್ರತಿಷ್ಠಿತಪ್ರಶಸ್ತಿಗಳು
18/06/2026

# ಪ್ರತಿಷ್ಠಿತಪ್ರಶಸ್ತಿಗಳು

  1 to 50
17/06/2026

1 to 50

 #ಮೊಬೈಲ್ ಸಿಮ್ ಮಾಹಿತಿ
09/06/2026

#ಮೊಬೈಲ್ ಸಿಮ್ ಮಾಹಿತಿ

 #ಭಾರತದ ಪ್ರಧಾನ ಮಂತ್ರಿಗಳು
09/06/2026

#ಭಾರತದ ಪ್ರಧಾನ ಮಂತ್ರಿಗಳು

05/06/2026

*🌻ದಿನಕ್ಕೊಂದು ಕಥೆ🌻 ಆತ ಗುರುವೇ ಇಲ್ಲದೆ ಚಾಂಪಿಯನ್ ಆಗಿದ್ದು ಹೇಗೆ?*

1896ರ ಹೊತ್ತಿನಲ್ಲಿ ಅಮೆರಿಕದಲ್ಲಿ ಬಾಕ್ಸಿಂಗ್ ಕ್ರೀಡೆ ಜನಪ್ರಿಯತೆಯ ತುತ್ತ ತುದಿಯಲ್ಲಿತ್ತು. ಈಗ ನಾವು ಸಿನಿ ತಾರೆಗಳನ್ನು, ಕ್ರಿಕೆಟ್ ಆಟಗಾರರನ್ನು ಆರಾಧಿಸುತ್ತೇವಲ್ಲ, ಹಾಗೆಯೇ ಆಗ ಅಲ್ಲಿ ಬಾಕ್ಸರ್‌ಗಳಿಗೆ ಬಹಳ ಮರ್ಯಾದೆ, ಮಾಧ್ಯಮಗಳಿಂದ ಮನ್ನಣೆ ಸಿಗುತ್ತಿದ್ದ ಕಾಲ. ಅದೊಂಥರ ಲಾಭದಾಯಕ ಕ್ರೀಡೆ ಕೂಡ ಆಗಿತ್ತು. ಆದರೆ ಬಾಕ್ಸಿಂಗ್ ಕಲಿಯುವುದು, ಪ್ರಸಿದ್ಧ ಬಾಕ್ಸರ್ ಆಗುವುದು ಅಷ್ಟೊಂದು ಸುಲಭದ ಹಾದಿಯೂ ಆಗಿರಲಿಲ್ಲ.

ಜ್ಯಾಕ್ ಜಾನ್ಸನ್ ಎಂಬ ಬಿಸಿರಕ್ತದ ಯುವಕನಿಗೆ ತಾನೊಬ್ಬ ಪ್ರಸಿದ್ಧ ಬಾಕ್ಸರ್ ಆಗಬೇಕೆಂಬ ಆಸೆಯಿತ್ತು. ಆದರೆ ಅವನ ಕನಸಿನ ಹಾದಿಗೆ ಒಂದು ದೊಡ್ಡ ಅಡೆತಡೆಯಿತ್ತು. ಅದೇ ಅವನ ಬಣ್ಣ! ಬಣ್ಣಕ್ಕೂ ಬಾಕ್ಸಿಂಗ್‌ಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರ? ಆತ ಇತರ ಅಮೆರಿಕನ್ನರಂತೆ ಬಿಳಿ ತೊಗಲಿನವನಲ್ಲ. ಆತನ ಬಣ್ಣ ಕಪ್ಪು. ಆಗ ಅಮೆರಿಕದಲ್ಲಿ ಕಪ್ಪು ವರ್ಣದವರಿಗೆ ಮನ್ನಣೆ, ಸಮಾನ ಅವಕಾಶ ಸಿಗುತ್ತಿರಲಿಲ್ಲ. ಅವರನ್ನು ಮನುಷ್ಯರಂತೆಯೂ ನಡೆಸಿಕೊಳ್ಳುತ್ತಿರಲಿಲ್ಲ. ಹಾಗಿರುವಾಗ ಬಾಕ್ಸಿಂಗ್ ಕಲಿಯುವ ಅವಕಾಶ ಜ್ಯಾಕ್‌ಗೆ ಸಿಗುವುದಾದರೂ ಹೇಗೆ?

ಜ್ಯಾಕ್‌ಗೆ ಬಾಕ್ಸಿಂಗ್ ಅಕಾಡೆಮಿಗಳಿಗೆ ಪ್ರವೇಶಾವಕಾಶ ಸಿಗಲಿಲ್ಲ. ಆತ ಶಾಸ್ತ್ರಬದ್ಧ ಬಾಕ್ಸಿಂಗ್ ಕಲಿಕೆಯಿಂದ ವಂಚಿತನಾದ. ಆದರೆ ಬಾಕ್ಸಿಂಗ್ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಲು ಕಪ್ಪು ವರ್ಣದವರಿಗೂ ಅವಕಾಶವಿತ್ತು. ತರಬೇತಿ ಪಡೆಯಲು ಬಿಡುವುದಿಲ್ಲ, ಆದರೆ ಸ್ಪರ್ಧೆಗೆ ಅವಕಾಶವೇ?!

ಹೌದು, ತರಬೇತಿಯಿಲ್ಲದ ಕಪ್ಪು ಬಣ್ಣದವರನ್ನು ಬಾಕ್ಸಿಂಗ್ ರಿಂಗ್‌ನಲ್ಲಿ ಹೀನಾಮಾನವಾಗಿ ಹೊಡೆದು ಉರುಳಿಸಲಾಗುತ್ತಿತ್ತು. ಕಪ್ಪು ಬಣ್ಣದವರನ್ನು ಪಂದ್ಯಾವಳಿಗಳಲ್ಲಿ ಬಿಳಿಯರು ಪಂಚಿಂಗ್ ಬ್ಯಾಗ್‌ಗಳಂತೆ ಉಪಯೋಗಿಸುತ್ತಿದ್ದರು. ಬಾಕ್ಸಿಂಗ್‌ನ ಪಟ್ಟುಗಳನ್ನು ಸರಿಯಾಗಿ ಕಲಿಯದ ಕಪ್ಪುವರ್ಣೀಯರು ಬಿಳಿಯರನ್ನು ಎದುರಿಸಲಾಗದೆ ಒದ್ದಾಡುವುದನ್ನು ನೋಡುವುದೇ ಅಲ್ಲಿ ನೆರೆದ ಜನಸ್ತೋಮಕ್ಕೆ ತಮಾಷೆಯ, ಮೋಜಿನ ಸಂಗತಿ. ಬಿಳಿಯ ಬಾಕ್ಸರ್‌ಗಳಿಗೆ ಇದೊಂಥರಾ ಪ್ರತಿಷ್ಠೆ ವಿಷಯ. ‘ಆ ಕರಿಯನನ್ನು ಹೊಡೆದುರುಳಿಸಿ’ ಎಂದು ಬಿಳಿಯ ಪ್ರೇಕ್ಷಕರು ಕೇಕೆ ಹಾಕಿದರೆ ಬಾಕ್ಸರ್‌ಗಳ ಅಹಂಕಾರ ಇನ್ನೂ ಹೆಚ್ಚುತ್ತಿತ್ತು. ಹಾಗಾಗಿ ಹೆಚ್ಚಿನ ಕಪ್ಪುವರ್ಣೀಯರು ಬಾಕ್ಸಿಂಗ್‌ನಿಂದ ದೂರವೇ ಉಳಿಯುತ್ತಿದ್ದರು.

ಆದರೆ ಜ್ಯಾಕ್ ಬೇರೆಯವರಂತೆ ಕನಸು ಕಾಣುತ್ತಾ ಸುಮ್ಮನೆ ಕೂರುವ ಆಸಾಮಿಯಲ್ಲ. ಬಾಕ್ಸಿಂಗ್ ಅಕಾಡೆಮಿಗಳಿಂದ ತಿರಸ್ಕೃತನಾದ ಅವನು ಮೊದಲು ಬಹಳ ಬೇಸರಪಟ್ಟುಕೊಂಡ. ಆದರೂ ತನ್ನ ಕನಸನ್ನು ಮಣ್ಣು ಮಾಡಲಿಲ್ಲ. ಬೇರೆಯವರು ನನಗೆ ಕಲಿಸದಿದ್ದರೇನಂತೆ ನಾನಾಗಿಯೇ ಬಾಕ್ಸಿಂಗ್ ಕಲಿಯುತ್ತೇನೆ ಎಂದು ನಿರ್ಧರಿಸಿದ. ‘ನಾನು ಬಾಕ್ಸರ್ ಆದೆ’ ಎಂದು ಯಾವಾಗ ನನಗನ್ನಿಸುತ್ತದೆಯೋ ಆಗ ನಾನು ಬಾಕ್ಸರ್ ಆಗುತ್ತೇನೆಯೇ ಹೊರತು, ಯಾರೋ ಒಬ್ಬರು ‘ನೀನು ಬಾಕ್ಸರ್ ಆಗಿದ್ದೀಯ’ ಎಂದು ಕೊಡುವ ಸರ್ಟಿಫಿಕೇಟ್‌ಗಳಿಂದ ನಾನು ಬಾಕ್ಸರ್ ಆಗುವುದಿಲ್ಲ. ಹಾಗಿದ್ದ ಮೇಲೆ ನಾನು ಬಾಕ್ಸಿಂಗ್ ಕಲಿಯಲು ಅಕಾಡೆಮಿಗಳನ್ನು ಆಶ್ರಯಿಸುವುದೇಕೆ ಎಂದು ಪ್ರಶ್ನಿಸಿಕೊಂಡ.

ಅಂದಿನಿಂದ ಅವನ ಕನಸಿಗೆ ಬಣ್ಣ ಹಚ್ಚುವ ಕೆಲಸ ಶುರುವಾಯಿತು. ಇಲ್ಲಿಯವರೆಗೆ ಅವನ ಬಣ್ಣದವರು ಮಾಡದ ಕೆಲಸವನ್ನು, ತೋರಿಸದ ಧೈರ್ಯವನ್ನು ಅವನು ತೋರಿಸಿದ. ಆತ ಬಾಕ್ಸಿಂಗ್ ತರಬೇತಿ ಪಡೆಯಲು ಮಾಡಿದ್ದೇನು ಗೊತ್ತೇ? ದೊಡ್ಡ ದೊಡ್ಡ ಬಾಕ್ಸಿಂಗ್ ಪಂದ್ಯಾವಳಿಗಳಿಗೆ ತನ್ನ ಹೆಸರನ್ನು ನೋಂದಾಯಿಸಿದ್ದು!

ಅದು ಈಜು ಬರದವನೊಬ್ಬ ಸೀದಾ ಸಮುದ್ರಕ್ಕೆ ಧುಮುಕಿದಂತೆ. ಪಂದ್ಯಾವಳಿಗಳಲ್ಲಿ ಅವನಿಗೆ ಚೆನ್ನಾಗಿ ಒದೆ ಬೀಳುತ್ತಿತ್ತು. ಬಿಳಿಯ ಬಾಕ್ಸರ್‌ಗಳು ಅವನನ್ನು ಚೆನ್ನಾಗಿ ಹೊಡೆದು ಹಣ್ಣುಗಾಯಿ, ನೀರುಗಾಯಿ ಮಾಡುತ್ತಿದ್ದರು. ಹೀಗೆ ಪೆಟ್ಟು ತಿನ್ನುವುದರಿಂದ ಮಾತ್ರ ತಾನು ಬಾಕ್ಸಿಂಗ್ ಕಲಿಯಲು ಸಾಧ್ಯ ಎಂಬುದು ಜ್ಯಾಕ್‌ನ ಅಭಿಪ್ರಾಯ. ಬೇರೆಯವರು ಗೆಲ್ಲುವುದನ್ನು ನೋಡುತ್ತಾ, ನೋಡುತ್ತಾ ಕಲಿಯುವುದೇ ಅವನ ತರಬೇತಿ.

ಆರಂಭದ ದಿನಗಳಲ್ಲಿ ಇವನು ಮೊದಲ ಸುತ್ತಿನಲ್ಲೇ ಸ್ಪರ್ಧೆಯಿಂದ ಹೊರಬಿದ್ದ. ಹೀಗೆ ಬೇಗ ಪಂದ್ಯಾವಳಿಯಿಂದ ದೂರ ಸರಿಯುತ್ತಿದ್ದುದರಿಂದ ತನಗೆ ಏನೂ ಕಲಿಯಾಗುತ್ತಿಲ್ಲ ಎಂಬುದು ಜ್ಯಾಕ್‌ಗೆ ಅರಿವಾಯಿತು. ತಾನು ಇನ್ನೂ ಹೆಚ್ಚು ಫೈಟ್ ಮಾಡಬೇಕು, ಹೆಚ್ಚು ಪೆಟ್ಟುಗಳನ್ನು ತಿಂದು ಜಾಸ್ತಿ ಹೊತ್ತು ಬಾಕ್ಸಿಂಗ್ ರಿಂಗ್‌ನಲ್ಲಿ ಉಳಿಯಬೇಕು ಎಂಬ ಛಲ ಅವನಲ್ಲಿ ಉಕ್ಕಿತು. ಅವನು ಪೆಟ್ಟುಗಳನ್ನು ತಿನ್ನುತ್ತಲೇ ಹೋದ, ನೋವುಗಳನ್ನು ನುಂಗಿಕೊಂಡ. ‘ಆ ಕರಿಯನನ್ನು ಹೊಡೆದು ಹಾಕು, ಅವನನ್ನು ಚಚ್ಚು..’ ಇತ್ಯಾದಿ ಅವಮಾನಗಳಿಗೆ ಅವನು ಕಿವುಡನಂತೆ ವರ್ತಿಸಿದ. ಅವನು ಪೆಟ್ಟು ತಿನ್ನುವುದನ್ನು ನೋಡಲೆಂದೇ ಜನರು ಸೇರುತ್ತಿದ್ದರು!

ಈಗ ಅವನು 20ರಿಂದ 25 ಸುತ್ತುಗಳಲ್ಲಿ ಸ್ಪರ್ಧಿಸುವಷ್ಟು ಗಟ್ಟಿಗನಾಗಿದ್ದ, ಬಾಕ್ಸಿಂಗ್‌ನ ಪಟ್ಟುಗಳನ್ನು ಕಲಿತಿದ್ದ. ಇಷ್ಟನ್ನು ಕಲಿಯಲು ಅವನು ಸಮಯ ತೆಗೆದುಕೊಂಡ, ಅಲ್ಲಲ್ಲ ಹಲವಾರು ವರ್ಷಗಳನ್ನು ತೆಗೆದುಕೊಂಡ! ಜ್ಯಾಕ್ ಕೇವಲ ಒಂದೆರಡು ವಾರ, ತಿಂಗಳು ಮಾತ್ರ ನೋವು ನುಂಗಿದ್ದಲ್ಲ. ವರ್ಷಾನುಗಟ್ಟಲೆ ನೋವು ನುಂಗಿ ಆ ಹಂತ ತಲುಪಿದ್ದ. ಜ್ಯಾಕ್‌ನ ಪ್ರಯತ್ನವನ್ನು ಗಮನಿಸಿದ ಕೆಲವರು ಅವನನ್ನು ಪ್ರಶಂಸಿಸಿದರು. ‘ಅಯ್ಯೋ ಇವನೊಬ್ಬ ಹುಚ್ಚ. ಬಿಳಿಯ ದೈತ್ಯರನ್ನು ಸೋಲಿಸಲು ಕರಿಯನಿಂದ ಸಾಧ್ಯವೇ? ಇಂಥ ಹುಚ್ಚಾಟಕ್ಕೆ ಒಂದು ದಿನ ಬಾಕ್ಸಿಂಗ್ ರಿಂಗ್‌ನಲ್ಲೇ ಇವನು ರಕ್ತಕಾರಿ ಸಾಯುತ್ತಾನೆ. ಇದೆಲ್ಲಾ ಬೇಕಾ ಈ ಕರಿಯನಿಗೆ?…’ ಎಂದೆಲ್ಲಾ ಮೂದಲಿಸಿದವರೇ ಹೆಚ್ಚು. ಆದರೆ ಜ್ಯಾಕ್ ನಿಜಕ್ಕೂ ಸೋಲುತ್ತಿರಲಿಲ್ಲ, ಆತ ಬಾಕ್ಸಿಂಗ್‌ನ ದೊಡ್ಡ ದೊಡ್ಡ ಪಟ್ಟುಗಳನ್ನು, ಪಾಠಗಳನ್ನು ತನ್ನ ಎದುರಾಳಿಗಳಿಂದ ಕಲಿಯುತ್ತಿದ್ದ. ತನಗೆ ಬೀಳುತ್ತಿದ್ದ ಒಂದೊಂದು ಪೆಟ್ಟು ಕೂಡ ಅವನಿಗೆ ಬಹಳ ಮುಖ್ಯವಾಗಿತ್ತು.

ಒಂದು ದಿನ ಜ್ಯಾಕ್ ಜಾನ್ಸನ್‌ಗೆ ತನ್ನ ಕಲಿಕೆ ಮುಗಿಯಿತು ಎಂದು ಅನಿಸಿತು. ಯಾರಿಗೂ ಸಿಗದ ಅತ್ಯುತ್ತಮ ಬಾಕ್ಸಿಂಗ್ ತರಬೇತಿ ಅದು! ‘ನಾನೀಗ ಬಾಕ್ಸರ್ ಆಗಿದ್ದೇನೆ’ ಎಂದು ತನಗೆ ತಾನೇ ಸರ್ಟಿಫಿಕೇಟ್ ಕೊಟ್ಟುಕೊಂಡ. ಹಾಗಾದರೆ ಮುಂದೇನಾಯ್ತು? ಯಾರು ಇವನನ್ನು ಹೊಡೆದು ಕೇಕೆ ಹಾಕಿ ನಕ್ಕಿದ್ದರೋ (ನಿಜಾರ್ಥದಲ್ಲಿ ಜ್ಯಾಕ್‌ನ ಗುರುಗಳು) ಅವರ ವಿರುದ್ಧವೇ ತೊಡೆ ತಟ್ಟಿ ನಿಂತ. ‘ಬಿಳಿಯ ದೈತ್ಯ’ರನ್ನು ಮೊದಲ ಸುತ್ತುಗಳಲ್ಲೇ ಕೆಡವಿ ಬೀಳಿಸಿ ‘ವರ್ಲ್ಡ್ ಹೆವಿ ವೆಯ್ಟ್ ಚಾಂಪಿಯನ್‌ಶಿಪ್’ನ ವಿಜೇತನಾದ!
ಅವನ ಎದುರಾಳಿಗಳಿಗೆ ಅಚ್ಚರಿ! ಜ್ಯಾಕ್ ಬಾಕ್ಸಿಂಗ್‌ನಲ್ಲಿ ಎಷ್ಟು ಪರಿಣತನಾಗಿದ್ದನೆಂದರೆ ಎದುರಾಳಿಯ ಮನಸ್ಸನ್ನು ಓದುವಷ್ಟು, ಅವರು ಪಟ್ಟುಗಳನ್ನು ಪ್ರಯೋಗಿಸುವ ಮುನ್ನವೇ ಅದನ್ನು ಪ್ರತಿರೋಧಿಸುವಷ್ಟು!

ಉಳಿದ ಬಾಕ್ಸರ್‌ಗಳಂತೆ ಜ್ಯಾಕ್ ನಿರ್ಜೀವ ಪಂಚಿಂಗ್ ಬ್ಯಾಗ್ ಉಪಯೋಗಿಸಿ ಬಾಕ್ಸಿಂಗ್ ಕಲಿತವನಲ್ಲ. ದೈತ್ಯ ಬಾಕ್ಸರ್‌ಗಳ ಪೆಟ್ಟಿನ, ಅವರ ದೇಹಭಾಷೆಯ, ಅವರು ಉಪಯೋಗಿಸುತ್ತಿದ್ದ ಪಟ್ಟು-ಪ್ರತಿಪಟ್ಟುಗಳ ಮೂಲಕ ಬಹಳ ಪ್ರಾಯೋಗಿಕವಾಗಿ ವಿದ್ಯೆ ಕಲಿತವನು. ಎಲ್ಲಕ್ಕೂ ಹೆಚ್ಚಾಗಿ ಅವನು ಕಲಿತಿದ್ದು ಸೋಲುಗಳ ಮೂಲಕ, ನೋವಿನ-ಅವಮಾನದ ಮೂಲಕ! ಇನ್ಯಾರು ತಾನೇ ಅವನನ್ನು ಸೋಲಿಸಲು ಸಾಧ್ಯ?

ಜ್ಯಾಕ್ ಜಾನ್ಸನ್‌ನ್ನು ಆ ಕಾಲದ ಶ್ರೇಷ್ಠ ಬಾಕ್ಸರ್ ಎಂದು ಜಗತ್ತು ಒಪ್ಪಿಕೊಂಡಿತು, ಅಪ್ಪಿಕೊಂಡಿತು. ಜ್ಯಾಕ್‌ನ ಕನಸು, ಛಲ ಮುಂದೆ ಮೊಹಮ್ಮದ್ ಆಲಿಯಂಥ ಹಲವಾರು ಬಾಕ್ಸರ್‌ಗಳಿಗೆ ಸ್ಫೂರ್ತಿಯಾಯಿತು. ಅಂದು ಜ್ಯಾಕ್ ಜಾನ್ಸನ್ ಹೋರಾಡಿದ್ದು ಕೇವಲ ಬಿಳಿಯ ಬಾಕ್ಸರ್‌ಗಳ ವಿರುದ್ಧ ಮಾತ್ರವಲ್ಲ. ಆತ ಹೋರಾಡಿದ್ದು ವರ್ಣಭೇದ ನೀತಿಯ ವಿರುದ್ಧ, ತನ್ನ ಕನಸಿಗೆ ಅಡ್ಡಗಾಲಾಗಿದ್ದ ಬಣ್ಣದ ಕೀಳರಿಮೆಯ ವಿರುದ್ಧ, ತನ್ನೊಳಗಿನ ಭಯದ ವಿರುದ್ಧ! ಹಾಗಾಗಿಯೇ ಇಂದಿಗೂ ಅವನನ್ನು ಒಬ್ಬ ‘ಫೈಟರ್’ ಎಂದು ಜಗತ್ತು ನೆನಪಿಸಿಕೊಳ್ಳುತ್ತದೆ. ಅವನಿಂದ ಸ್ಫೂರ್ತಿ ಪಡೆಯುತ್ತದೆ. ನೋವು, ಅವಮಾನ ಕಲಿಸುವ ಪಾಠವನ್ನು ಯಾವ ಗುರುವೂ, ಯಾವ ಶಾಲೆ-ಕಾಲೇಜು- ವಿಶ್ವವಿದ್ಯಾಲಯದ ಪದವಿಯೂ ಕಲಿಸುವುದಿಲ್ಲ.

ಕೃಪೆ: ವಿಶ್ವವಾಣಿ.
ಸಂಗ್ರಹ :ವೀರೇಶ್ ಅರಸಿಕೆರೆ.

*🌹ಆರೋಗ್ಯ ಪ್ರಭಾತ🌹* ××=××=××=××=××=××=××=××*ಜೋಳದ ಆರೋಗ್ಯ ಪ್ರಯೋಜನಗಳು* ××=××=××=××=××=××=××=××ಮೆಕ್ಕೆಜೋಳವು ದೇಹದಲ್ಲಿರುವ ಅಧಿಕ ಕೊ...
01/06/2026

*🌹ಆರೋಗ್ಯ ಪ್ರಭಾತ🌹*

××=××=××=××=××=××=××=××
*ಜೋಳದ ಆರೋಗ್ಯ ಪ್ರಯೋಜನಗಳು*
××=××=××=××=××=××=××=××

ಮೆಕ್ಕೆಜೋಳವು ದೇಹದಲ್ಲಿರುವ ಅಧಿಕ ಕೊಬ್ಬನ್ನು ಕಡಿಮೆ ಮಾಡುತ್ತದೆ. ಮುಸುಕಿನ ಜೋಳವು ಬಯೋಫ್ಲೇವೊನೈಡ್ಗಳು, ಕ್ಯಾರೊಟಿನಾಯ್ಡ್ಗಳು, ವಿಟಮಿನ್ಗಳು ಮತ್ತು ಫೈಬರ್ಗಳನ್ನು ಹೊಂದಿರುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಮೆಕ್ಕೆಜೋಳವು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

*ಮೂಳೆಗಳು ಬಲಗೊಳ್ಳುತ್ತವೆ:*

ಮೆಕ್ಕೆಜೋಳವು ಮೆಗ್ನೀಸಿಯಮ್ ಮತ್ತು ಕಬ್ಬಿಣಾಂಶವನ್ನು ಹೊಂದಿರುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಇದರ ಜೊತೆಗೆ, ಸತು ಮತ್ತು ರಂಜಕವನ್ನು ಹೊಂದಿರುತ್ತದೆ. ಇದು ಮೂಳೆ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಮೆಕ್ಕೆ ಜೋಳದಲ್ಲಿ ಝಿಂಕ್ ಮತ್ತು ಫಾಸ್ಫರಸ್ ಕೂಡ ಇದ್ದು ಇದು ಮೂಳೆ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

*ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್:*

ಇದರ ವಿರುದ್ಧ ರಕ್ಷಿಸುತ್ತದೆ. ದೇಹಕ್ಕೆ ಶಕ್ತಿ ಸಿಗುತ್ತದೆ ಮೆಕ್ಕೆಜೋಳವು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಕೆಲಸ ಮಾಡುವಾಗ ನಿಮಗೆ ಆಯಾಸ ಅಥವಾ ಆಲಸ್ಯ ಅನಿಸಿದರೆ, ನಿಮ್ಮ ಆಹಾರದಲ್ಲಿ ಮೆಕ್ಕೆ ಜೋಳವನ್ನು ಸೇರಿಸಿ. ಇದು ಹೊಟ್ಟೆಯನ್ನು ತ್ವರಿತವಾಗಿ ತುಂಬಿಸುತ್ತದೆ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ.

*ದೃಷ್ಟಿ ಸುಧಾರಿಸುತ್ತದೆ:*

ಮೆಕ್ಕೆಜೋಳವು ನಿಮ್ಮ ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಇದೆ. ಇದು ನಿಮ್ಮ ದೃಷ್ಟಿಯನ್ನು ಸುಧಾರಿಸುತ್ತದೆ. ಮೆಕ್ಕೆಜೋಳದ ಕಾಳುಗಳು ಲ್ಯುಟೀನ್ ಅನ್ನು ಹೊಂದಿರುತ್ತವೆ, ಇದು ಕಣ್ಣಿನ ಪೊರೆಯನ್ನು ತಡೆಯುತ್ತದೆ. ಇದಲ್ಲದೆ, ಪ್ರತಿದಿನ ಮೆಕ್ಕೆಜೋಳದ ತಿನ್ನುವುದರಿಂದ ನಿಮ್ಮ ದೃಷ್ಟಿ ಸುಧಾರಿಸುತ್ತದೆ.

*ಹೊಟ್ಟೆಯ ಸಮಸ್ಯೆಗಳನ್ನು ತಡೆಯುತ್ತದೆ:*

ಅಸಿಡಿಟಿ, ಮಲಬದ್ಧತೆ ಮುಂತಾದ ಹೊಟ್ಟೆಯ ಸಮಸ್ಯೆಗಳುಇರುವುದು ಪ್ರಯೋಜನಕಾರಿ ಮೆಕ್ಕೆ ಜೋಳದಲ್ಲಿ ನಾರಿನಂಶವಿದ್ದು ಇದು ಹೊಟ್ಟೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಮೆಕ್ಕೆಜೋಳದಲ್ಲಿ ಮೆಗ್ನೀಸಿಯಮ್ ಮತ್ತು ಐರನ್ ಸಮೃದ್ಧವಾಗಿದೆ.

*ರೋಗನಿರೋಧಕ ಶಕ್ತಿ:*

ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅನೇಕ ಜನರು ನಿರಂತರವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅಂತಹವರ ಆಹಾರದಲ್ಲಿ ಮೆಕ್ಕೆಜೋಳ ಇರಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಕಬ್ಬಿಣ, ವಿಟಮಿನ್ ಎ, ಥಯಾಮಿನ್, ವಿಟಮಿನ್ ಬಿ 6, ಸತು, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳನ್ನು ಹೊಂದಿರುವ ಕಾರ್ನ್ ಅನ್ನು ಸೇವಿಸಬೇಕು.

ಮೆಕ್ಕೆಜೋಳವನ್ನು ಕೇವಲ ಕುದಿಸಿ ತಿನ್ನುವುದು ಉತ್ತಮ ವಿಧಾನ.
ಆಗಾಗ ರುಚಿಗಾಗಿ ಒಂದು ಕಪ್ ಬೇಯಿಸಿದ ಮೆಕ್ಕೆಜೋಳದ ಕಾಳುಗಳಲ್ಲಿ. ಟೊಮ್ಯಾಟೊ (ಸಣ್ಣದಾಗಿ ಕೊಚ್ಚಿ), ಒಂದು ಸಣ್ಣ ಈರುಳ್ಳಿ (ಸಣ್ಣದಾಗಿ ಕೊಚ್ಚಿ), ಒಂದು ಚಮಚ ಬೆಣ್ಣೆ, ಒಂದು ಚಮಚ ನಿಂಬೆ ರಸ, ರುಚಿಗೆ ಉಪ್ಪು ಮತ್ತು ಮೆಣಸು ಸೇರಿಸಿ. ಇದು ರುಚಿಕರವಾಗಿರುತ್ತದೆ ಮತ್ತು ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ.
--------

*ಇತರ ಗುಂಪುಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳಿ 🙏*
-------------

ಕನ್ನಡಕ್ಕೆ:
*ಡಾ. ಪ್ರ. ಅ. ಕುಲಕರ್ಣಿ*
=================

ಇತ್ತೀಚಿನ ದಿನಗಳಲ್ಲಿ, ಸ್ಥಳೀಯ ನಾಟಿ ಮೆಕ್ಕೆಜೋಳದ ಬದಲಿಗೆ, ಸಿಹಿಮೆಕ್ಕೆ (ಸ್ವೀಟ್ ಕಾರ್ನ)ಅನ್ನು ಯಾವಾಗಲೂ ಮತ್ತು ವ್ಯಾಪಕವಾಗಿ ತಿನ್ನಲಾಗುತ್ತದೆ. ನಮ್ಮ ದೇಶೀಯ ನಾಟಿ ಮೆಕ್ಕೆಜೋಳವನ್ನು ಆಹಾರಕ್ಕಾಗಿ ಬಳಸುವುದು ಬಹಳ ಕಡಿಮೆಯಾಗಿದೆ. ಇದಲ್ಲದೆ ವಿದೇಶಿ ಕಾರ್ನ್ ಕಡಿಮೆ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಹೆಚ್ಚು ಹಾನಿಕಾರಕವಾಗಿದೆ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ GMO ವಿಧಗಳು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿವೆ. ಆದ್ದರಿಂದ, ಸಿಹಿ ಮೆಕ್ಕೆ ತಿನ್ನಲು ತುಂಬಾ ರುಚಿಯಾಗಿದ್ದರೂ, ಅದನ್ನು ತಿನ್ನುವುದನ್ನು ಕಡಿಮೆ ಮಾಡಬೇಕು ಮತ್ತು ಯಾವಾಗಲೂ ಸ್ಥಳೀಯ ಮೆಕ್ಕೆಜೋಳವನ್ನು ಬಳಸಬೇಕು. ಸ್ವೀಟ್ ಕಾರ್ನ್ ಕಡಿಮೆ ಪೋಷಕಾಂಶಗಳನ್ನು ಹೊಂದಿದೆ ಮತ್ತು ಹೆಚ್ಚಿನ ಸಕ್ಕರೆಯನ್ನು ಹೊಂದಿರುತ್ತದೆ. ಮೆಕ್ಕೆಜೋಳ ಯಾವುದೇ ಆದರೂ ಮಿತವಾಗಿ ಬಳಸುವುದು ಒಳ್ಳೆಯದು.

*ಡಾ. ಪ್ರ. ಅ. ಕುಲಕರ್ಣಿ*
🌺🌺🌺🌺🙏🌺🌺🌺🌺

* ಹೋಮಿಯೋಪತಿ ಚಿಕಿತ್ಸೆ ಪ್ರಯೋಜನಗಳು*
🔹 ಶಾಶ್ವತ ಹಾಗೂ ಸಮಗ್ರ ಪರಿಹಾರ
🔹 ಯಾವುದೇ ಅಡ್ಡ ಪರಿಣಾಮಗಳಿಲ್ಲ
🔹 ನೈಸರ್ಗಿಕ ಹಾಗೂ ಪರಿಣಾಮಕಾರಿ
🔹 ಇತರ ಚಿಕಿತ್ಸೆಗಳಿಗಿಂತ ಕಡಿಮೆ ವೆಚ್ಚ.
🔹 ಅನುಭವಸ್ಥ ಮತ್ತು ತಜ್ಞ ವೈದ್ಯರಿಂದಲೇ ಪಡೆಯಬೇಕು
---------

ಹೆಚ್ಚಿನ ಮಾಹಿತಿ ಮತ್ತು ಚಿಕಿತ್ಸೆಗಾಗಿ ಸಂಪರ್ಕಿಸಿ:
*ಡಾ. ಪ್ರ. ಅ. ಕುಲಕರ್ಣಿ: 8861108929*
_ಸಮಯ: ಬೆಳಗ್ಗೆ 7:30 ರಿಂದ ರಾತ್ರಿ 9:30_
(ವೀಡಿಯೊ ಕರೆಗಳನ್ನು ಸ್ವೀಕರಿಸುವುದಿಲ್ಲ)
🌹🌺🌺🌺🙏🌺🌺🌺🌹

ಮಧುಮೇಹ ಮುಕ್ತಿ ಮತ್ತು ಆರೋಗ್ಯಕರ ಜೀವನದ ಬಗ್ಗೆ ಉಪಯುಕ್ತ ಮಾಹಿತಿಗಾಗಿ ಗುಂಪಿಗೆ ಸೇರಿ ಮತ್ತು ಕೆಳಗಿನ ಕೊಂಡಿಯನ್ನು ಬಳಸಿ ಇತರರನ್ನು ಸಮೂಹಕ್ಕೆ ಆಹ್ವಾನಿಸಿ: 👇🏻
https://whatsapp.com/channel/0029Vb7lvYD7oQhhC0vgs10g

Follow ಮಧುಮೇಹ ಮುಕ್ತಿ ಮತ್ತು ಆರೋಗ್ಯ's WhatsApp channel. ಈ ಚಾನೆಲ್ನಲ್ಲಿ ನೀವು ಮಧುಮೇಹದ ಬಗ್ಗೆ ಲೇಖನಗಳು, ಮಧುಮೇಹ ನಿರ್ವಹಣೆಗಾಗಿ ಉಚಿತ ಮತ್ತು ಸೂಕ್ತ ಸಲಹೆಗಳು, ಜೀವನ ಶೈಲಿಯ ಸಲಹೆಗಳು, ಮಧುಮೇಹ ನಿವಾರಣೆಗೆ ಸರ್ವೋತ್ತಮ ಚಿಕಿತ್ಸೆಯ ಬಗ್ಗೆ ಮಾಹಿತಿ, ಇತ್ಯಾದಿಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀವು ಪಡೆಯಬಹುದು.
ಅಲ್ಲದೆ ಆರೋಗ್ಯಕರ ಜೀವನಕ್ಕಾಗಿ ಮತ್ತು ಇತರ ಎಲ್ಲ ಬಗೆಯ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿಗಾಗಿ ಇದೊಂದು ಉತ್ತಮ ಮಾಧ್ಯಮ.. Join 877 followers for the latest updates.

Address

Muddebihal
586212

Website

Alerts

Be the first to know and let us send you an email when ಗಣಿತ ಕಲಿಕೆ ತುಂಬಾ ಸುಲಭ ಮತ್ತು ವಿಜ್ಞಾನ ಅತಿ ಸುಲಭ posts news and promotions. Your email address will not be used for any other purpose, and you can unsubscribe at any time.

Shortcuts

Share