28/08/2026
ರಾಷ್ಟ್ರ ರಕ್ಷಕರಿಗೆ, ರಕ್ಷಾ ಬಂಧನ.🇮🇳🚩
- ಗಡಿಯ ದೇವರಿಗೆ ,ನಾಡಿನ ರಾಖಿ.📿
ನಮ್ಮೂರಿನ ಸುತ್ತಲಿನ ಶಾಲಾ-ಕಾಲೇಜುಗಳಲ್ಲಿ ರಕ್ಷಾಬಂಧನದ ಅಂಗವಾಗಿ ನಮ್ಮ ಎಲ್ಲಾ ಯುವ ಗೆಳೆಯರ ಬಳಗದ ಜೊತೆ ಸೇರಿ, ಮೂರು ದಿನ ಮುಂಚಿತವಾಗಿ ಹೋಗಿ ಯೋಧರಿಗಾಗಿ ಒಂದೆರಡು ಸ್ವರಚಿತ ಸಾಲುಗಳನ್ನ ಬರೆಯುವಂತೆ ಎಲ್ಲಾ ಸಹೋದರಿಯರಿಗೆ ನಮ್ಮದೇ ಹಾಳೆಗಳನ್ನು ವಿತರಿಸಿ, ಎರಡು ದಿನಗಳ ನಂತರ ಆ ಹಾಳೆಯೊಂದಿಗೆ ಅವರ ರಾಖಿಗಳನ್ನು ನಾವು ಸಂಗ್ರಹಿಸಿ ಭಾರತೀಯ ಸೇನೆಗೆ ಕಳುಹಿಸಿಕೊಟ್ಟೆವು.
ಈ ಪುಣ್ಯಕಾರ್ಯದಲ್ಲಿ ಜೊತೆಯಾದವರು:
ಪ ಚ ಮ ಪ್ರೌಢಶಾಲೆ ,ಗುಡಿಗೇರಿ,
ನ್ಯೂ ಹೈ ಸ್ಕೂಲ್, ಕಳಸ,
ಸರಕಾರಿ ಪ್ರೌಢಶಾಲೆ, ಹರ್ಲಾಪುರ,
ಪ ಚ ಮ ಪದವಿ ಪೂರ್ವ ಕಾಲೇಜು ,ಗುಡಗೇರಿ,
ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜು, ಗುಡಿಗೇರಿ.
ಹಾಗೂ ಗ್ರಾಮಗಳ ಅನೇಕ ದೇಶಭಕ್ತ ಸಹೋದರಿಯರು,
ಭಗತ್ ಸಿಂಗ್ ಯುವಕ ಮಂಡಳಿ ಗುಡಿಗೇರಿ,
ಕಳಸ, ಹರಲಾಪುರ,ಗುಡಗೇರಿ ಗ್ರಾಮಗಳ ದೇಶಭಕ್ತ ಸಂಘಟನೆಗಳು,
ಎಲ್ಲಾ ಕಾಲೇಜುಗಳ ಶಾಲೆಗಳ ಎಸ್ ಡಿಎಂಸಿ ಮಂಡಳಿ.
ಈ ಎಲ್ಲ ಮಹನೀಯರಿಗೆ ಹೃತ್ಪೂರ್ವಕ ಧನ್ಯವಾದಗಳು.🇮🇳🚩
Video