30/04/2026
|| ಆಮೋದ || ರಾಷ್ಟೀಯ ನೃತ್ಯ ಉತ್ಸವ - 2 ಯ ಸಂಚಿಕೆ
ಅಂತರಾಷ್ಟ್ರೀಯ ನೃತ್ಯ ದಿನಾಚರಣೆಯ ಪ್ರಯುಕ್ತ ದಿಕ್ಸೂಚಿ ಕಲ್ಚರಲ್ ಟ್ರಸ್ಟ್ (ರಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗ ದೊಂದಿಗೆ || ಆಮೋದ || ರಾಷ್ಟ್ರೀಯ ನೃತ್ಯ ಉತ್ಸವ ದ ಎರಡನೇ ಸಂಚಿಕೆಯನ್ನು ಬುಧವಾರ ಕನ್ನಡ ಭವನ ಚಿಕ್ಕ ಬಳ್ಳಾಪುರದಲ್ಲಿ ಆಯೋಜಿಸಿದ್ದರು.
*ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರ ಗಳನ್ನು ಒಂದು ವೇದಿಕೆಯ ಮೇಲೆ ತರುವುದು ಇದರ ಉದ್ದೇಶ ವಾಗಿತ್ತು.* ಇದರ ಭಾಗವಾಗಿ ದಿಕ್ಸೂಚಿ ನಾಟ್ಯಾಲಯದ ಭರತನಾಟ್ಯ, ಆಂಧ್ರ ನಾಟ್ಯ, ಬೆಂಗಳೂರಿನ ನೃತ್ಯ ಧಾರಾ ಫೌಂಡೇಶನ್ ನಿಂದ ಒಡಿಸ್ಸಿ, ದಿಶಾ ಸೆಂಟರ್ ಫಾರ್ ಎಕ್ಸೆಲೆನ್ಸ್ ನಿಂದ ಕಥಕ್, ಚಿಂತಾಮಣಿಯ ಶಿವಾನ್ವಿತ ಕಲಾ ಮಂದಿರ ವತಿಯಿಂದ ಭರತನಾಟ್ಯ ವೇದಿಕೆಯ ಮೇಲೆ ಪ್ರದರ್ಶನ ಗೊಂಡಿತು.
ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಹಿರಿಯ ನಟ ಉದಯ್ ಕುಮಾರ್ ರವರ ಸುಪುತ್ರಿ ಶ್ರೀಮತಿ ರೇಣುಕಾ ಬಾಲಿ, ಹಿರಿಯ ಪತ್ರಕರ್ತರಾದಂತಕ ಶ್ರೀ ಲೇಪಾಕ್ಷಿ ಸಂತೋಷ್ ರಾವ್, ಶ್ರೀ ಐಶ್ವರ್ಯ ಕಲಾನಿಕೇತನ ಸಂಸ್ಥಾಪಕರಾದ ಶ್ರೀ ಪ್ರಸನ್ನ ಕುಮಾರ್ ರವರು ಭಾಗವಹಿಸಿದರು.
ಅತಿಥಿಗಳು ಭಾಗವಹಿದ ಎಲ್ಲಾ ತಂಡಗಳಿಗೂ ಪ್ರಮಾಣ ಪತ್ರ ವಿತರಿಸಿದರು. ಜಗನ್ನಾಥ್ ರವರು ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ಮಿಶ್ರಾ ತಂಡದ ಓಡಿಸಿ, ಹರಿಪ್ರಿಯ ಹೊಸಮನಿ ಯವರ ಆಂಧ್ರ ನಾಟ್ಯ, ಪ್ರಿಯಾ ಸಿಸ್ಟರ್ಸ್ ಅಲ್ಲಿ ಒಬ್ಬರಾದ ಕಾರ್ತಿಕ ಪ್ರಿಯ ಎಸ್.ಆರ್ ಅವರ ಕಥಕ್ ಮತ್ತು ಶ್ರೀಮತಿ ದಿವ್ಯ & ಕುಮಾರಿ ಮೀನಾಕ್ಷಿ ತಂಡದ ಭರತನಾಟ್ಯ ಎಲ್ಲಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.