08/12/2020
*ನಗ್ರಿ -ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ ಚಾಂಪಿಯನ್ ಟ್ರೋಫಿ ಗೆದ್ದ ಎಂ ಎಂ ಕಿಂಗ್ಸ್ ಕುಕ್ಕಾಜೆ*
Friends Circle KUKKAJE
ಇದರ ವತಿಯಿಂದ ಆಹ್ವಾನಿತ 10 ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟವು ಕಾಂಜಿಲ ಮೈದಾನ ನಗ್ರಿ, ಬೊಳ್ಳಾಯಿ ಯಲ್ಲಿ ದಿನಾಂಕ 06-12-2020 ಆದಿತ್ಯವಾರ ಮತ್ತು 07-12-2020 ಸೋಮವಾರ ನಡೆಯಿತು. ಒಟ್ಟು 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಎ ಗುಂಪಲ್ಲಿ ಸ್ಪರ್ಶ ಕುಕ್ಕಾಜೆ, ಎಮ್.ಎಮ್.ಕಿಂಗ್ಸ್ ಕುಕ್ಕಾಜೆ, ಹೀರೊ ಖಂಡಿಗ, ಯೂತ್ ಕೌನ್ಸಿಲ್. ಬಿ.ಮಂಚಿ, ಫ್ರೆಂಡ್ಸ್ ನೂಜಿ, ಬಿ. ಗುಂಪಲ್ಲಿ ನ್ಯೂ ಸ್ಟಾರ್ ಕುಕ್ಕಾಜೆ, ಯುವಕ ಮಂಡಳ ಕುಕ್ಕಾಜೆ, ನಸೀಬ್ ಸಾಲೆತ್ತೂರ್, ಯೂತ್ ಕೌನ್ಸಿಲ್ .ಬಿ. ಮಂಚಿ, ನಮ್ಮ ಬೊಳ್ಳಾಯಿ.
ಎ ಗುಂಪಿನಿಂದ ಎಮ್.ಎಮ್.ಕಿಂಗ್ಸ್ ಕುಕ್ಕಾಜೆ ಮತ್ತು ಸ್ಪರ್ಶ ಕುಕ್ಕಾಜೆ ಹಾಗೂ ಬಿ ಗುಂಪಿನಿಂದ ನಮ್ಮ ಬೊಳ್ಳಾಯಿ ಮತ್ತು ಯುವಕ ಮಂಡಳ ಕುಕ್ಕಾಜೆ ಸೆಮಿಫೈನಲ್ಸ್ ಗೆ ತೇರ್ಗಡೆ ಆಯಿತು. ಮೊದಲ ಸೆಮಿಫೈನಲ್ ನಲ್ಲಿ ನಮ್ಮ ಬೊಳ್ಳಾಯಿ ತಂಡವು ಸ್ಪರ್ಶ ತಂಡವನ್ನು ಸೋಲಿಸಿ ಹಾಗೂ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಎಮ್.ಎಮ್ ಕಿಂಗ್ಸ್ ಕುಕ್ಕಾಜೆ ತಂಡವು ಯುವಕ ಮಂಡಳ ಕುಕ್ಕಾಜೆ ತಂಡವು ಸೋಲಿಸಿ ಪೈನಲ್ ಗೆ ಅರ್ಹತೆ ಪಡೆಯಿತು.
ಪೈನಲ್ ಪಂದ್ಯದಲ್ಲಿ ಸ್ಥಳೀಯ ತಂಡವಾದ ನಮ್ಮ ಬೊಳ್ಳಾಯಿ ತಂಡವನ್ನು ಸೋಲಿಸಿ ಎಮ್.ಎಮ್. ಕಿಂಗ್ಸ್ ಕುಕ್ಕಾಜೆ ತಂಡವು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಪಂದ್ಯಾವಳಿಯ ಬೆಸ್ಟ್ ಬ್ಯಾಟ್ಸ್‌ಮನ್ ಆಗಿ ಬೊಳ್ಳಾಯಿ ತಂಡದ ಬಾಷ ಬೊಳ್ಳಾಯಿ, ಬೆಸ್ಟ್ ಫೀಲ್ಡರ್ ಆಗಿ ಮಹೇಶ್ ಬೊಳ್ಳಾಯಿ, ಬೆಸ್ಟ್ ಬೌಲರ್ ಆಗಿ ನವಾಜ್ ಕುಕ್ಕಾಜೆ, ಬೆಸ್ಟ್ ಆಲ್ ರೌಂಡರ್ ಆಗಿ ಆಸೀಫ್ ಕುಕ್ಕಾಜೆ ಹಾಗೂ ಟೂರ್ನಮೆಂಟ್ ಹೀರೋ ಆಗಿ ಕಲೀಲ್ ಕಾಪಿಕಾಡ್ ರವರು ಆಯ್ಕೆಯಾದರು.
ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಕ್ ಕುಕ್ಕಾಜೆ,ಮಂಚಿ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಇಬ್ರಾಹಿಂ ಜಿ ಎಂ,ಮಾಜಿ ಕ್ರಿಕೆಟ್ ಪಟುಗಳಾದ ಫೈಝಲ್ ಕುಕ್ಕಾಜೆ,ಲತೀಫ್ ಕುಕ್ಕಾಜೆ,ಹಂಝ ಮಜ್ಮ ಕುಕ್ಕಾಜೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆಸೀಫ್ ಕುಕ್ಕಾಜೆ ಸ್ಕೋರರ್ ಆಗಿ,
ಸಮದ್ ಕುಕ್ಕಾಜೆ ಸ್ವಾಗತಿಸಿ
ಸಿದ್ದಿಕ್ ಕುಕ್ಕಾಜೆ ಧನ್ಯವಾದ ಸಲ್ಲಿಸಿದರು.
ನಜೀರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.