10/11/2019
🇧🇭 *ಬಹರೈನ್* ❤ *ಬ್ರದರ್ಸ್*🇮🇳
ಲೋಕ ಪ್ರವಾದಿ *ﷺ* ಜನ್ಮದಿನ ಪ್ರಯುಕ್ತ ಬಹರೈನ್ ಬ್ರದರ್ಸ್ ವತಿಯಿಂದ ಪ್ರತಿ ವರ್ಷ ನಡೆಸಿಕೊಂಡು ಬರುವ ಮೌಲೂದ್ ಪಾರಾಯಣ ಕಾರ್ಯಕ್ರಮವು ಕಳೆದ ರಾತ್ರಿ ಬುದಯ್ಯದಲ್ಲಿರುವ ಫಾರಿಸ್ ಅವರ ರೂಮಿನಲ್ಲಿ ನಡೆಯಿತು.
ಹಾರಿಸ್ ಸಂಪ್ಯ ಅವರ ದುಆದೊಂದಿಗೆ ಪ್ರಾರಂಭವಾದ ಈ ಆತ್ಮೀಯ ಮೌಲೂದ್ ಮಜ್ಲಿಸ್ ನಲ್ಲಿ ಎಲ್ಲರೂ ಪ್ರವಾದಿ *ﷺ* ರವರ ಪ್ರಕೀರ್ತನೆ ಹಾಡಿ ತನ್ಮಯರಾದರು.
ನಂತರ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರವಾದಿ (ﷺ)ಪ್ರೇಮದ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. ಹಾಗೂ ದೀನೀಪ್ರಜ್ಞೆಯುಳ್ಳವರಾಗಬೇಕೆಂದು ಯುವಕರಿಗೆ ಕಿವಿಮಾತು ಹೇಳಿದರು.
ನಂತರ ಅಶ್ರಫ್ ರೆಂಜಾಡಿ ನೇತೃತ್ವದಲ್ಲಿ "ಅಶ್ರಖ ಬೈತ್" ಹಾಡಲಾಯಿತು. ಖಲಂದರ್ ಉಸ್ತಾದ್ ಅವರ ಭಕ್ತಿನಿರ್ಭರ ದುಆದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.
ಬಹರೈನ್ ಬ್ರದರ್ಸ್ ಗೆಳೆಯರು ಐಹಿಕ ಗೆಳೆತನವನ್ನು ಉಪಯೋಗಿಸಿ ಆಧ್ಯಾತ್ಮಿಕ ಕಾರ್ಯಕ್ರಮ ಸಂಘಟಿಸಿದ್ದು ಪ್ರಶಂಸನೀಯವಾಯಿತು. ಕೊನೆಗೆ ಊರಿನ ಸಾಂಪ್ರದಾಯಿಕ ತಬರ್ರುಕ್ "ಯರ್ಚಿ ಪತ್ರ್" ವಿತರಿಸಲಾಯಿತು.
ನಿನ್ನೆಯ ಕಾರ್ಯಕ್ರಮಕ್ಕೆ ಸುಸಜ್ಜಿತ ಸ್ಥಳಾವಕಾಶ ನೀಡಿದ ಫಾರಿಸ್ ಅವರಿಗೆ ಮತ್ತು ಉಪಹಾರವನ್ನು ಸಿದ್ಧಗೊಳಿಸಲು ಶ್ರಮಿಸಿದ ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಹಾಗೂ ಆಗಮಿಸಿದ ಎಲ್ಲರಿಗೂ ಅಲ್ಲಾಹನು ಖೈರ್ ಬರಕತ್ ನೀಡಲಿ.
*آميــــــن يـا رب الــعالمــيــــــــن*