20/04/2023
ಆತ್ಮೀಯ ಬಾಂಧವರೇ,
35 ವರ್ಷಗಳ ಕಾಲ ಓರ್ವ ಸರ್ಕಾರಿ ಅಧಿಕಾರಿಯಾಗಿದ್ದಾಗ ತಾವೆಲ್ಲರೂ ನನ್ನನ್ನು ಪ್ರೀತಿಯಿಂದ ಗೌರವಿಸಿದ್ದೀರಿ. ನಂತರ ನನ್ನ 11 ವರುಷಗಳ ರಾಜಕೀಯ ಜೀವನದಲ್ಲಿ ಮಮತೆಯಿಂದ ಆಶೀರ್ವದಿಸಿ 2013-2018 ರವರೆಗೆ ಶಾಸಕನಾಗಿ ತಮ್ಮ ಸೇವೆ ಮಾಡುವ ಭಾಗ್ಯವನ್ನು ನೀಡಿರುತ್ತೀರಿ. ಈ ಸಮಯದಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ತಮ್ಮೆಲ್ಲರ ಗೌರವವನ್ನು ಹೆಚ್ಚಿಸಲು ಪಣತೊಟ್ಟು ದುಡಿದಿರುತ್ತೇನೆ. ಇದೀಗ ಮಗದೊಮ್ಮೆ ತಮ್ಮೆಲ್ಲರ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷವು ನನ್ನನ್ನು ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಿದೆ. ಅಂತೆಯೇ ಇಂದು ನಾನು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುತ್ತೇನೆ. ಮಂಗಳೂರು ನಗರ ದಕ್ಷಿಣ ಕ್ಷೇತ್ರವನ್ನು ಮತ್ತೊಮ್ಮೆ ಅಭಿವೃದ್ಧಿ, ಸಂಸ್ಕೃತಿ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಉತ್ತುಂಗಕ್ಕೇರಿಸುವ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ; ತಮ್ಮ ಸೇವೆಯನ್ನು ಮಾಡಲು ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ಆಶೀರ್ವದಿಸಬೇಕಾಗಿ ವಿನಮ್ರಪೂರ್ವಕವಾಗಿ ವಿನಂತಿಸುತ್ತೇನೆ.