BELAPU SPORTS CLUB

BELAPU SPORTS CLUB In addition to sports, the club actively participates in social service initiatives.

Belapu Sports Club(R) was establishe in the year 1994 by dedicated group of local youth, the club has organized numerous sports events to engage and nurture local talent.

16/08/2026
16/08/2026

ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಅದ್ಧೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಆಯೋಜಿಸಿದ BSC ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಕಳೆದ ಎರಡು ವಾರಗಳಿಂದ ನಮ್ಮ ಮಕ್ಕಳು ಹಾಗೂ ಸದಸ್ಯರಿಗಾಗಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ನಿರಂತರವಾಗಿ, ದಣಿವರಿಯದೆ ಶ್ರಮಿಸಿದ ನಿಮ್ಮೆಲ್ಲರ ಪರಿಶ್ರಮ ನಿಜಕ್ಕೂ ಶ್ಲಾಘನೀಯ.

ಪ್ರಶಸ್ತಿ ವಿಜೇತರು ಹಾಗೂ ಕ್ರೀಡಾ ವಿಜೇತರಿಗೆ ಮತ್ತೊಂದು ಸ್ಮರಣೀಯ ದಿನವನ್ನು ನೀಡಿದಕ್ಕಾಗಿ ವಿಶೇಷ ಅಭಿನಂದನೆಗಳು. ನಿಮ್ಮ ಸಮರ್ಪಣೆ ಮತ್ತು ಉತ್ಸಾಹಕ್ಕೆ ತುಂಬು ಹೃದಯದ ಮೆಚ್ಚುಗೆಗಳು.

Gen Z ಮತ್ತು Gen Alpha ಪೀಳಿಗೆಯನ್ನು ಪ್ರೋತ್ಸಾಹಿಸಿ, ಅವರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸುವಲ್ಲಿ ಮುಂದಾಳತ್ವ ವಹಿಸಿದ ಶ್ರೀ ಫರೀದ್ ಭಾಯ್ ಅವರಿಗೆ ವಿಶೇಷ ಧನ್ಯವಾದಗಳು.

ಅದೇ ರೀತಿ, ಸದಾ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಿರುವ ನಮ್ಮ ಗೌರವಾನ್ವಿತ ಅಧ್ಯಕ್ಷರಿಗೆ ಹೃತ್ಪೂರ್ವಕ ಧನ್ಯವಾದಗಳು.

BSC ತಂಡದ ಎಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳು ಹಾಗೂ ಶುಭಾಶಯಗಳು! 🇮🇳👏

https://www.facebook.com/share/18grmXzWnP/
23/03/2026

https://www.facebook.com/share/18grmXzWnP/

ಪ್ರಸಿದ್ಧ ಕ್ರಿಕೆಟಿಗ,ಕ್ರೀಡಾ ಪ್ರೋತ್ಸಾಹಕ ಸಮೀರ್ ಶರೀಫ್ ಪಾಂದೆ ನಿಧನ.

ಉಡುಪಿ-ಪ್ರಸಿದ್ಧ ಕ್ರಿಕೆಟಿಗ,ಕ್ರೀಡಾ ಪ್ರೋತ್ಸಾಹಕ ಸಮೀರ್ ಶರೀಫ್ ಪಾಂದೆ(43)ಮೆದುಳಿನ ಕ್ಯಾನ್ಸರ್ ಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾದರು.

ಉತ್ತಮ ಕ್ರಿಕೆಟ್ ಆಟಗಾರರಾಗಿದ್ದ ಸಮೀರ್ ಶರೀಫ್ ಇವರು ಸ್ಪೋರ್ಟ್ಸ್ ಕನ್ನಡ ಮಧ್ಯಪ್ರಾಚ್ಯ ಪ್ರತಿನಿಧಿ ವಿಠಲ್ ರಿಶಾನ್ ನಾಯಕ್ ರವರ ಅತ್ಯಂತ ಆತ್ಮೀಯರಾಗಿದ್ದು,ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದರು.

ಇವರ ಅಂತ್ಯ ಕ್ರಿಯೆಯ ವಿಧಿವಿಧಾನಗಳು ಇಂದು (ಮಾರ್ಚ್ 23)ಸೋಮವಾರ ಸಂಜೆ 4.30 ಕ್ಕೆ ಉದ್ಯಾವರದ ಮಸೀದಿಯಲ್ಲಿ ನಡೆಯಲಿದೆ.

ಬಳಿಕ ದಫನ ಕ್ರಿಯೆ ಉದ್ಯಾವರ ಖಬ್ರಸ್ಥಾನದಲ್ಲಿ ಜರುಗಲಿದೆ.ಪ್ರಸ್ತುತ ಸಮೀರ್ ರವರ ಮೃತದೇಹ ಅವರ ನಿವಾಸ ಉದ್ಯಾವರದ ಪಾಂದೆಯಲ್ಲಿ ಇದ್ದು ಅಂತಿಮ ನಮನ ಸಲ್ಲಿಸಲು ಅವಕಾಶವಿದೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಾವರ ಫ್ರೆಂಡ್ಸ್ ಸರ್ಕಲ್ ನ ಸಕ್ರಿಯ ಸದಸ್ಯರಾಗಿದ್ದು,ಉದ್ಯಾವರ ಮೊಹಿದ್ದೀನ್ ಜುಮ್ಮಾ ಮಸೀದಿ ಜಮಾತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು,ಮೃತರು ಪತ್ನಿ,ಓರ್ವ ಪುತ್ರಿ ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸ್ಪೋರ್ಟ್ಸ್ ಕನ್ನಡ ಚಾನೆಲ್ ವತಿಯಿಂದ ಅಗಲಿದ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.




24/02/2026

Zimbabwe captain after the loss vs WI 🗣

Address

Near Rahmaniya Circle
Kaup
574117

Alerts

Be the first to know and let us send you an email when BELAPU SPORTS CLUB posts news and promotions. Your email address will not be used for any other purpose, and you can unsubscribe at any time.

Shortcuts

Share

Category